ಸತ್ಯ ಹೆಗ್ಡೆ ನಿರ್ಮಾಣದಲ್ಲಿ ಮೂರು ಸರಣಿ ಕಿರುಚಿತ್ರಗಳು
ಕನ್ನಡ ಚಿತ್ರರಂಗದ ಹೆಸರಾಂತ ಛಾಯಾಗ್ರಾಹಕ ಸತ್ಯ ಹೆಗ್ಡೆ ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆ "ಸತ್ಯ ಹೆಗ್ಡೆ ಸ್ಟುಡಿಯೊಸ್" ಹೊಂದಿದ್ದು, ಅದರ ಮೂಲಕ ಅವಕಾಶವಂಚಿತ ಪ್ರತಿಭಾನ್ವಿತ ನಿರ್ದೇಶಕರಿಗೆ, ಕಥಾ ಲೇಖಕರಿಗೆ, ತಂತ್ರಜ್ಞರಿಗೆ ಸಹಾಯ ಹಸ್ತ ಚಾಚುತ್ತಾ ಬಂದಿದ್ದಾರೆ.

